ಸೂರಪ್ಪ ನಾಗಣ್ಣ ನಿರ್ದೇಶಿಸಿದ ಮತ್ತು ಸೂಪರ್ ಹಿಟ್ ಫಿಲ್ಮ್ಸ್ ನಿರ್ಮಿಸಿದ 2000 ರ ಕನ್ನಡ ಚಲನಚಿತ್ರವಾಗಿದೆ. ವಿಷ್ಣುವರ್ಧನ್ ಅವರ ಈ 175 ನೇ ಚಿತ್ರದಲ್ಲಿ ಚರಣ್ ರಾಜ್, ಶ್ರುತಿ ಮತ್ತು ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನು ಹಂಸಲೇಖ ಅವರು ಬರೆದಿರುವುದಲ್ಲದೆ ಚಿತ್ರಕ್ಕೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ಈ ಚಿತ್ರವು ಮಮ್ಮುಟ್ಟಿ ಮತ್ತು ದೇವಯಾನಿ ಅಭಿನಯದ, ತಮಿಳಿನ ಬ್ಲಾಕ್‌ಬಸ್ಟರ್ ಚಲನಚಿತ್ರ ಮಾರು ಮಲರ್ಚಿ (1998) ಯ ರೀಮೇಕ್ ಆಗಿದೆ. ಚಿತ್ರ ವಿಮರ್ಶಕರಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದ ಈ ಚಿತ್ರವು ಮತ್ತು ೨೦೦೦ ನೇ ವರ್ಷದ ದೊಡ್ಡ ಹಿಟ್ ಆಗಿತ್ತು. == ಪಾತ್ರವರ್ಗ == ವಿಷ್ಣುವರ್ಧನ್ ಸೂರಪ್ಪ ಪಾತ್ರದಲ್ಲಿ ಸತ್ಯಪ್ರಿಯಾ ಶ್ರುತಿ ಚರಣ್ ರಾಜ್ ಅನು ಪ್ರಭಾಕರ್ ಚಿ ಗುರುದತ್ ಬ್ಯಾಂಕ್ ಜನಾರ್ದನ್ ಎಂಎನ್ ಲಕ್ಷ್ಮೀದೇವಿ ರಮೇಶ್ ಭಟ್ ಟೆನ್ನಿಸ್ ಕೃಷ್ಣ ಮನದೀಪ್ ರಾಯ್ ಕೃಷ್ಣೇಗೌಡ == ಚಿತ್ರಸಂಗೀತ == ಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯ ಹಂಸಲೇಖ ಅವರದು . ಎಲ್ಲ ಹಾಡುಗಳು ಹಂಸಲೇಖ ಅವರಿಂದ ರಚಿತ == ಉಲ್ಲೇಖಗಳು ==